(www.vknews.in) ; ದಕ್ಷಿಣ ಕರ್ನಾಟಕದ ಪ್ರತಿಷ್ಠಿತ ಮತ ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಅಲ್ ಖಾದಿಸ ಕಾವಲಕಟ್ಟೆ ಇದರ ಯು.ಎ.ಇ ರಾಷ್ಟ್ರೀಯ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮದಿನಾಚರಣೆಯ ಪ್ರಯುಕ್ತ ಅಲ್-ಮುಕ್ತಾರ್ ಮೀಲಾದ್ ಕಾನ್ಫರೆನ್ಸ್ಇದೇ ಬರುವ ಸೆಪ್ಟೆಂಬರ್ 8ರ ಭಾನುವಾರ ಸಂಜೆ 5:30 ಕ್ಕೆ ಅಲ್ ನಹ್ದಾ ಮೆಟ್ರೊ ಸ್ಟೇಷನ್ ಹತ್ತಿರವಿರುವ ಅಲ್ ಬುಸ್ತಾನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಅಲ್ ಖಾದಿಸ ಶಿಲ್ಪಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ (ಕಾವಲಕಟ್ಟೆ ಹಝ್ರತ್) ನೇತೃತ್ವ ವಹಿಸಲಿರುವ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ನೌಫಲ್ ಸಖಾಫಿ ಕಳಸ ಉಸ್ತಾದರು ಹುಬ್ಬುರ್ರಸೂಲ್ ಪ್ರಭಾಷಣಗೈಯಲಿದ್ದು ,ಮೀಲಾದ್ ಸಮಿತಿ ಛೇರ್ಮನ್ ಇಕ್ಬಾಲ್ ಸಿದ್ದಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ,ಧಾರ್ಮಿಕ ನಾಯಕರು ಗಣ್ಯವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದು ಸಮಾರಂಭದಲ್ಲಿ ಮೌಲಿದ್,ಬುರ್ದಾ,ನಆತ್ ಕಾರ್ಯಕ್ರಮವಿರುತ್ತದೆ. ಯು.ಎ.ಇ ಯಲ್ಲಿರುವ ಎಲ್ಲಾ ಸುನ್ನಿ ಕಾರ್ಯಕರ್ತರು ಈ ಕಾರ್ಯಕ್ರಮವನ್ನು ವಿಜಯಿಗೊಳಿಸಬೇಕಾಗಿ ಸಂಘಟಕರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.