(www.vknews.in) : ‘ಬೀಬಿ ಆಶೂರಾಅ್ ವುಮೆನ್ಸ್ ಕಾಲೇಜು ಮಂಗಳೂರು ಇದರ ನಾಲ್ಕನೇ ವರ್ಷದ ಉಚಿತ ಡಿಪ್ಲೋಮಾ ಇನ್ ಇಸ್ಲಾಮಿಕ್ ಶರೀಅತ್ ಕೋರ್ಸ್ ನ ಪ್ರಾರಂಭೋತ್ಸವ ಹಾಗೂ ಪೋಷಕರ ತರಬೇತಿಯನ್ನು ಅಧ್ಯಕ್ಷರಾದ ಅಬೂಬಕರ್ ಸಿದ್ದೀಖ್ ಬೆಂಗ್ರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನಾಲ್ಕನೇ ವರ್ಷದ ಶರೀಅತ್ ತರಗತಿಯನ್ನು ಉದ್ಘಾಟಿಸಿದ ಅವರು, ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲಾ ಮಕ್ಕಳು ಇಂತಹಾ ಉಚಿತ ಕೋರ್ಸಿನ ಪ್ರಯೋಜನ ಪಡೆಯಬೇಕೆಂದು ಅವರು ಆಗ್ರಹಿಸಿದರು.
ಪ್ರಾನ್ಸುಪಾಲರಾದ ಹನೀಫ್ ಸಖಾಫಿ ವಿದ್ಯಾರ್ಥಿನಿಯರ ಧಾರ್ಮಿಕ ಹಾಗೂ ಲೌಖಿಕ ವಿದ್ಯಾಭ್ಯಾಸದ ಮಹತ್ವ ಹಾಗೂ ಅವರ ದೈನಂದಿನ ಜೀವನದಲ್ಲಿ ಅಳವಡಿಸಬೇಕಾದ ಶಿಸ್ತು ಕ್ರಮವನ್ನು ಪೋಷಕರ ಸಹಾಯದಿಂದ ಹೇಗೆ ಕ್ರಮೀಕರಿಸಿ ಸಮುದಾಯದ ಮಾದರೀ ಮಹಿಳೆಯರನ್ನಾಗಿ ರೂಪೀಕರಿಸಬಹುದೆಂದು ವಿವರಿಸಿದರು.
ಸ್ವಾತಂತ್ರೋತ್ಸವದಲ್ಲಿ ನಡೆಸಲಾದ ಹಲವು ವಿಧದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಶರೀಅತ್ ಶಿಕ್ಷಕಿ ನಾಫಿಆ ಹಾಗೂ ಕಂಪ್ಯೂಟರ್ ಶಿಕ್ಷಕಿಯಾದ ರೇಶ್ಮಾ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.