ಮಸ್ಕತ್ (www.vknews.in) : ಉಮ್ರಾ ಮುಗಿಸಿ ತಾಯ್ನಾಡಿಗೆ ಮರಳುತ್ತಿದ್ದ ಕೇರಳದ ಕೋಝಿಕ್ಕೋಡ್ ಮೂಲದವರೊಬ್ಬರು ವಿಮಾನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಡಕರ ಅಜಿಕಲ್ ಕುನುಮ್ಮಲ್ ಶರ್ಮಿನಾ (39) ಮೃತಪಟ್ಟವರು.
ಓಮನ್ ಏರ್ನಲ್ಲಿ ಜೆಡ್ಡಾದಿಂದ ಮಸ್ಕತ್ ಮೂಲಕ ವಾಪಸಾಗುತ್ತಿದ್ದಾಗ ಶರ್ಮಿನಾಗೆ ಅಸ್ವಸ್ಥಗೊಂಡಿದ್ದು, ವಿಮಾನ ಮಸ್ಕತ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ವೈದ್ಯರು ಸಾವನ್ನು ದೃಢಪಡಿಸಿದರು. ಅವರ ಹತ್ತು ವರ್ಷದ ಹಿರಿಯ ಮಗ ಮುಹಮ್ಮದ್ ಜೊತೆಗಿದ್ದನು. ಮೃತರು ಮೈನ್ಕುಟ್ಟಿ-ಶರೀಫಾ ದಂಪತಿಯ ಪುತ್ರಿ. ಗಂಡ: ರಯೀಸ್ ವಾಲಿ ಪರಂಪತ್. ಇತರೆ ಮಕ್ಕಳು: ಕದೀಜಾ ಮತ್ತು ಆಯೇಷಾ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.