ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ):ಹಿಜಾಬ್ ವಿವಾದ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ ಉಡುಪಿ ಮಹಿಳಾ ಕಾಲೇಜಿಗೆ ಸೀಮಿತವಾಗಿದ್ದ ವಿವಾದ ಈಗ ಜಿಲ್ಲೆಯ ಎಲ್ಲಾ ಕಾಲೇಜುಗೂ ಹಬ್ಬಲಾರಂಭಿಸಿದೆ. ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜು ,ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ,ಬೈಂದೂರು ಸರ್ಕಾರಿ ಕಾಲೇಜು ,ಬಸ್ರೂರು ಶಾರದಾ ಕಾಲೇಜುಗಳ ವರೆಗೆ ಇದೀಗ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಮುಂದುವರಿದಿದ್ದೂ ,ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರು ಶಾಲು ತೊಟ್ಟು ವಿವಾದ ಇಮ್ಮಡಿಗೊಳಿಸುತ್ತಿವೆ . ಉಡುಪಿ ಮಹಿಳಾ ಕಾಲೇಜಿನಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಪೋಷಕರ ಸಭೆ ಕರೆದು ಒಂದು ಹಂತಕ್ಕೆ ತರುವಲ್ಲಿ ಶ್ರಮಿಸಿದರಾದರೂ ಆ ಆರು ವಿದ್ಯಾರ್ಥಿನೀಯರು ತಮ್ಮ ಹಠವನ್ನು ಮುಂದುವರಿಸಿದ್ದರಿಂದ ಕಾಲೇಜಿನ ಆವರಣಕ್ಕೆ ಪ್ರವೇಶ ನಿಷೇಧ ಮಾಡಲಾಗಿದೆ ಆ ವಿದ್ಯಾರ್ಥಿ ನೀಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ . ಇತ್ತ ಕುಂದಾಪುರದ ಜೂನಿಯರ್ ಕಾಲೇಜಿನಲ್ಲೂ ಸ್ಕಾರ್ಫ್ ವಿವಾದ ಹುಟ್ಟಿ ಕೊಂಡಿದೆ.ಹಿಜಾಬ್ ಧಾರಿಣಿಯರಿಗೆ ಮನ ಒಲಿಸಲು ಪ್ರಯತ್ನಪಟ್ಟರೂ, ಫಲ ಕಾಣದೇ ಇದ್ದ ಪರಿಣಾಮ ಕುಂದಾಪುರ ಕಾಲೇಜು ಕ್ಯಾಂಪಸ್ ಒಳಗೆ ಬಂದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದು ನಿಲ್ಲಿಸಿದ್ದಾರೆ. ಹಾಗೆಯೇ ಗೇಟ್ ಬಂದ್ ಮಾಡಿದ್ದಾರೆ . ಈ ವಿದ್ಯಾರ್ಥಿಗಳು ಪೋಷಕರ ಜೊತೆ ಪ್ರತಿಭಟನೆ ನಡೆಸುತ್ತಿದ್ದಾರೆ . ಪ್ರತಿಭಟನೆ ನಡೆಸಿದರೇ ಎಫ್ ಐ ಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ಪೊಲೀಸ್ ಇಲಾಖೆ ನೀಡಿದೆ . ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದದ್ದಕ್ಕೆ ಪ್ರತಿಯಾಗಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜುನಲ್ಲಿ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಬಂದಿದ್ದರು. ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಾ ಬಂದಿದ್ದ ವಿದ್ಯಾರ್ಥಿಗಳನ್ನು ಗೇಟಿನಲ್ಲೇ ತಡೆದು ನಿಲ್ಲಿಸಿದ ಕಾಲೇಜು ಆಡಳಿತ ಮಂಡಳಿ ,ಶಾಲು ತೆಗೆದಿಟ್ಟು ಬಂದ್ರೆ ಮಾತ್ರ ಪ್ರವೇಶ ಎಂದು ಹೇಳಿದಾಗ ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. ಇನ್ನು ಜಿಲ್ಲೆಯ ಬೈಂದೂರು ಕಾಲೇಜು ,ಬಸ್ರೂರು ಶಾರದಾ ಕಾಲೇಜುಗಳ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಹಾಜರಾಗಿದ್ದರು. ಒಟ್ಟಾರೆ ಈ ಹಿಜಾಬ್ ವಿವಾದ ಎಲ್ಲಿಗೆ ಹೋಗಿ ಮುಟ್ಟೊತ್ತೋ ಗೊತ್ತಿಲ್ಲ ಶಾಲಾ ವಾತಾವರಣದಲ್ಲಿ ಸೌಹಾರ್ಧತೆ ಕೆಡಬಾರದು, ಸರಕಾರದ ಮುಂದಿನ ಆದೇಶ ಬರುವತನಕ ಹಿಜಬ್ ಧರಿಸಿ ಬರಕೂಡದು ಎಂದು ಕಾಲೇಜು ಆಡಳಿತ ಮಂಡಳಿ ವಿನಂತಿಸಿದರೂ ಫಲ ಕಾಣುತ್ತಿಲ್ಲ . ಹೀಗೆ ಮುಂದುವರಿದರೆ ಇಡೀ ರಾಜ್ಯಾದ್ಯಂತ ಈ ಸಂಘರ್ಷ ಉಂಟಾದರೂ ಅಚ್ಚರಿ ಇಲ್ಲ. ಆರು ಜನ ವಿದ್ಯಾರ್ಥಿನಿಯರಿಂದ ಇಡೀ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎಂಬ ದೂರು ಉಡುಪಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳಿಂದ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.