ಮಾಣಿ (ವಿಶ್ವ ಕನ್ನಡಿಗ ನ್ಯೂಸ್) : ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಅಧೀನದ ಕೆಜಿಎನ್ ಪಿಯು ಕಾಲೇಜು ದ್ವಿತೀಯ ಪಿಯುಸಿ 2021-22 ರ ಸಾಲಿನಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ (91%) ಉತ್ತಮ ಫಲಿತಾಂಶ ದಾಖಲಿಸಿದೆ.
9 ಮಂದಿ ವಿದ್ಯಾರ್ಥಿಗಳು, 10 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು, 28 ವಿದ್ಯಾರ್ಥಿಗಳು, 16 ವಿದ್ಯಾರ್ಥಿನಿಯರು ಪ್ರಥಮ ದರ್ಜೆ, 12 ವಿದ್ಯಾರ್ಥಿಗಳು 1 ವಿದ್ಯಾರ್ಥಿನಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 572 ಅಂಕಗಳನ್ನು ಪಡೆದಿರುವ ಫಾತಿಮತು ತಫ್ಕೀನಾ ಕಾಲೇಜಿಗೆ ಪ್ರಥಮ ಸ್ಥಾನಿಯಾದರೆ, 565 ಅಂಕಗಳನ್ನು ಪಡೆದು ಸುಮಯ್ಯತ್ ರಫೀಖಾ ಕಾಂತಡ್ಕ ದ್ವಿತೀಯ ಹಾಗೂ ರಮೀಝ್ (562) ತೃತೀಯ ಸ್ಥಾನ ಗಳಿಸಿದ್ದಾರೆ.
ಉಳಿದಂತೆ ಆಯಿಷತ್ ತಶ್ರೀಫಾ ಕೋಲ್ಪೆ ಅಳಕೆಮಜಲು(549), ಫಾತಿಮತ್ ಶಾಹಿದಾ ಪಾಟ್ರಕೋಡಿ(549), ಶುಹದಾ ಶಾಂತಿನಗರ ಕಂಬಳಬೆಟ್ಟು(549) ಫಾತಿಮತುನ್ನಿಸಾ ಪಾಟ್ರಕೋಡಿ(548), ಮುಹಮ್ಮದ್ ಇಸ್ಮಾಈಲ್ ಬಿಲಾಲ್(543), ಅಹ್ಮದ್ ಯಾಸೀನ್(533), ಫಾತಿಮತ್ ತ್ವಯಿಬಾ(532), ಹಲೀಮತ್ ತ್ವಾಹಿರಾ (531), ಮುಹಮ್ಮದ್ ಇರ್ಫಾನ್(519), ಮುಹಮ್ಮದ್ ಮಿದ್ಲಾಜ್(518), ಅಬ್ದುಲ್ ರಶೀದ್(515), ಫಾತಿಮತ್ ಆಫಿಯ(515), ಮುಹಮ್ಮದ್ ತ್ವಾಹಾ ಮುಷ್ತಾಖ್ (514), ಮುಹಮ್ಮದ್ ಇಖ್ಬಾಲ್ ಬಿ(511), ಸಫ್ನಾಝ್ (511) ಗಮನಾರ್ಹ ಅಂಕಗಳ ಗಳಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ದಾರುಲ್ ಇರ್ಶಾದ್ ಮೇನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಅಭಿನಂದಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.