(www.vknews.in)ಕೆ.ಪಿ.ಸಿ.ಸಿ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ರವರು ಇತ್ತೀಚೆಗೆ ನಿಧನ ಹೊಂದಿದ ಕಲ್ಲುಗದ್ದೆ ಶೇಷಪ್ಪ ಮಾಸ್ಟರ್ ಅರಂತೋಡು ರವರ ನಿವಾಸಕ್ಕೆ ಭೇಟಿನೀಡಿ ಅವರ ಕುಟುಂಬ ವರ್ಗದವರಿಗೆ ಸಾಂತ್ವನ ತಿಳಿಸಿದರು. ನಮ್ಮೆಲ್ಲರ ಹಿರಿಯ ಚೇತನ ಹಾಗೂ ಮಾರ್ಗದರ್ಶಕರಾಗಿದ್ದ ಶೇಷಪ್ಪ ಮಾಸ್ಟರ್ ರವರು ನಮ್ಮ ಮುತ್ತಜ್ಜ ದಿವಂಗತ ಪಠೇಲ್ ಅಹಮ್ಮದ್ ಹಾಜಿ ಮತ್ತು ಅಜ್ಜ ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ಯವರ ಹಿತೈಷಿಯಾಗಿ ತಂದೆಯವರಿಗೆ, ತಂದೆಯವರ ಎಲ್ಲ ಸಹೋದರ ಸಹೋದರಿಯರಿಗೆ ನನಗೆ ಹಾಗೂ ಸಾವಿರಾರು ಜನರಿಗೆ ಗುರುಗಳಾಗಿದ್ದರು. ದೇಶದ ವಿವಿಧ ಭಾಗದಲ್ಲಿ ಸಾವಿರಾರು ಶಿಷ್ಯರನ್ನು ಹೊಂದಿದ ಅವರು ಕೃಷಿಯೊಂದಿಗೆ ಊರಿನ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು, ಅವರ ನಿಧನದಿಂದ ಶಿಕ್ಷಣ ಕ್ಷೇತ್ರ ಹಾಗು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಅವರ ಕುಟುಂಬಕ್ಕೆ ಸಂತಾಪ ತಿಳಿಸಿದರು. ಟಿ.ಎಂ.ಶಾಹಿದ್ ರವರು ಅವರ ಭಾವಚಿತ್ರಕ್ಕೆ ನಮನವನ್ನು ಸಲ್ಲಿಸಿ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಈ ಸಂಧರ್ಭದಲ್ಲಿ ಅವರ ಪುತ್ರರಾದ ನಿವೃತ್ತ ಶಿಕ್ಷಕ ಚಂದ್ರಶೇಖರ ಮಾಸ್ತರ್, ವಸಂತ ಕುಮಾರ್ ಹಾಗು ಅರುಣ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.