(www.vknews.in) ಕರ್ನಾಟಕ ಸಾಂಸ್ಕೃತಿಕ ಪರಿಷತ್ ಹಾಗೂ ಸೃಷ್ಟಿ ಶಕ್ತಿ ಸಂಸ್ಥೆ (ರಿ.) ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಕರ್ನಾಟಕ ವೈಭವ ಕಾರ್ಯಕ್ರಮ ದಲ್ಲಿ ವಿವಿಧ ಕಲೆ, ಸಾಹಿತ್ಯ,ನಾಡು ನುಡಿ ಸಂಸ್ಕೃತಿಗೆ ವರ್ಣಿಸಲದಳವಾದ ಅನುಪಮ ಸೇವೆ ಸಲ್ಲಸಿರುವ ಹಾಗೂ ಸ್ತುತ್ಯಾರ್ಹವಾದ ಸಾಧನೆ ಮಾಡಿದ ಅರ್ಹಗಣ್ಯ ಮಹನೀಯರನ್ನು ಗುರುತಿಸುವ ಮೂಲಕ ಭವ್ಯ ಕರ್ನಾಟಕದ ಅಭಿವೃದ್ಧಿಗೆ ನೆರವಾದವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆ ಸಾಮಾಜಿಕ ಕಾರ್ಯಕರ್ತ ಡಾ.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಬೆಂಗಳೂರು ಚಾಮರಾಜ ಪೇಟೆಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಸವನಗುಡಿ ಶ್ರೀ ಮಹಾ ಸಂಸ್ಥಾನಂ ಇದರ ಶ್ರೀ ಶ್ರೀ ಶ್ರೀ ಸಾತ್ವಿ ಯೋಗಿನಿ ಮಾತಾ, ಕನ್ನಡದ ಏಸುದಾಸ್ ಖ್ಯಾತಿಯ ಗಾಯಕ ಶಶಿದರ್ ಕೋಟೆ, ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಮತ್ತು ಸೃಷ್ಟಿ ಸಂಸ್ಥೆಯ ಅಧ್ಯಕ್ಷರಾದ ಡಾ.ಇಸಾಕ್ ದೊಡ್ಡೇರಿ, ರಾಷ್ಟ್ರೀಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಟ್ರಸ್ಟ್ ಬೆಂಗಳೂರು ಇದರ ಎಲ್. ವೆಂಕಟೇಶ್ ಗೌಡ, ಅಖಿಲ ಕರ್ನಾಟಕ ನಾಮ ಫಲಕ ಕಲಾವಿದರ ಸಂಘ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಡಾ.ನೇತ್ರಾನಂದ ಎಮ್.ಎನ್, ಹಾಗೂ ಡಾ.ಅನಂತ್ ಎಲ್. ಝಂಡೇಕರ್, ಹರೀಶ್ ಕುಮಾರ್ ಎಮ್.ಎ, ಜೂನಿಯರ್ ರಾಜ್ಕುಮಾರ್ ಖ್ಯಾತಿಯ ಡಾ.ಕೆ.ಸಿ ವೆಂಕಟರಾಮು, ಪರಿಸರವಾದಿ ಪರಿಸ ಚಂದ್ರಶೇಖರ್ ಆರ್ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.