ಮಂಗಳೂರು(www.vknews.in): ಅಲ್ ಗಝ್ಝಾಲಿ ಇಸ್ಲಾಮಿಕ್ ಎಜುಕೇಷನ್ ಸೆಂಟರ್ ಗ್ರೀನ್ ಲ್ಯಾಂಡ್ ಬಜ್ಪೆ ಇದರ ಅದಿನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಗಝ್ಝಾಲಿ ಪ್ರಿ ಸ್ಕೂಲ್ ದಿನಾಂಕ 2-06-2024 ರಂದು ಉದ್ಘಾಟನೆಗೊಂಡಿತು. SJM ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮುಹಿಯುದ್ದೀನ್ ಕಾಮಿಲ್ ಸಖಾಫಿಯವರ ಅದ್ಯಕ್ಷತೆಯಲ್ಲಿ, ಹಿಲ್ಟೊಪ್ ಹನೀಫ್ ರವರು ಉದ್ಘಾಟಿಸಿ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿಝ್ಝಾಮಿ ಜರಿನಗರ ಮತ್ತು P. S ಸವಾದ್ ಸಹದಿ ಶುಭಾಶಂಷೆ ಗೈದರು. ಅಲ್ ಗಝ್ಝಾಲಿ ಇಸ್ಲಾಮಿಕ್ ಎಜುಕೇಷನ್ ಸೆಂಟರ್ ಇದರ ಕಾರ್ಯದರ್ಶಿ ಶಬೀರ್ ಅಲಿ ಬಜ್ಪೆ ಸ್ವಾಗತಿಸಿದರು, ಫೌಝನ್ ರವರು ವಂದಿಸಿದರು. ವಿದೇಶದಲ್ಲಿರುವ ಸಂಸ್ಥೆಯ ಸಂಸ್ಥಾಪಕರು ಹಾಗು ಅಧ್ಯಕ್ಷರಾದ ಮೊಹಮ್ಮದ್ ಅಲಿ ಹಾಜಿ ಯವರು ಶುಭ ಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.