ದುಬೈ(www.vknews.in): ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟುತ್ತಿರುವುದರಿಂದ, ಯುಎಇಯ ಅಧಿಕಾರಿಗಳು ತಮ್ಮ ಶುಕ್ರವಾರದ ಧರ್ಮೋಪದೇಶ ಮತ್ತು ಪ್ರಾರ್ಥನೆಯನ್ನು 10 ನಿಮಿಷಗಳ ಕಾಲ ಮಿತಿಗೊಳಿಸುವಂತೆ ದೇಶಾದ್ಯಂತ ಇಮಾಮ್ಗಳನ್ನು ಕೇಳಿದ್ದಾರೆ. ನಿರ್ದೇಶನವು ಶುಕ್ರವಾರ, ಜೂನ್ 28 ರಿಂದ ಅಕ್ಟೋಬರ್ ವರೆಗೆ ಅನ್ವಯಿಸುತ್ತದೆ. ಶುಕ್ರವಾರದ ಪ್ರಾರ್ಥನೆಗಳಿಗೆ ಎಲ್ಲಾ ಮಸೀದಿಗಳು ಬೇಗನೇ ಭರ್ತಿಯಾಗುವುದರಿಂದ ಅನೇಕರು ತೆರೆದ ಸ್ಥಳಗಳಲ್ಲಿ, ರಸ್ತೆಗಳಲ್ಲಿ ನಿಂತು ಪ್ರಾರ್ಥನೆ ಮಾಡುವುದರಿಂದ, ಈಗಿನ ಸುಡುಬಿಸಿಲು ಆರಾಧಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಪ್ರಾರ್ಥನೆಗಳನ್ನು 10 ನಿಮಿಷಗಳಿಗೆ ಸೀಮಿತ ಗೊಳಿಸಲು ತೀರ್ಮಾನಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.