(www.vknews.in) ; ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ವತಿಯಿಂದ ಬಡಗಕಜೆಕಾರ್ ಗ್ರಾಮದ ನವಗ್ರಾಮ ಎಂಬಲ್ಲಿ ಬಡ ಕುಟುಂಬಕ್ಕೆ ನೂತನ ಮನೆಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಪಾಂಡವರಕಲ್ಲು ಜಮಾತ್ ಖತೀಬರಾದ ಸಲೀಂ ಫೈಝಿ ಇರ್ಫಾನಿ ದುವಾ ನೆರವೇರಿಸಿ ಮಾತನಾಡಿದರು. ಖ್ಯಾತ ಪ್ರಭಾಷಣಗಾರ ಉಸ್ತಾದ್ ಹಕೀಂ ಮದನಿ ಪಾಂಡವರಕಲ್ಲು ಶುಭವಚನ ನೀಡಿದರು. ಜುಮ್ಮಾ ಮಸೀದಿ ಅಧ್ಯಕ್ಷರು ಹಾಗು ಬಡಗಕಜೆಕಾರ್ ಪಂಚಾಯತ್ ಸದಸ್ಯರು ಆದ ಅಥಾವುಲ್ಲಾ ಕೆದಿಲೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಂದರ್ಭದಲ್ಲಿ ಪಿ ಎಫ್ ಐ ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ಜಿಲ್ಲಾ ಉಸ್ತುವಾರಿ ನವಾಝ್ ಕುದ್ರಡ್ಕ, ಪಿಎಫ್ಐ ಪಾಂಡವರಕಲ್ಲು ಅಧ್ಯಕ್ಷರಾದ ನಾಸಿರ್, ಎಸ್ಡಿಪಿಐ ಪಾಂಡವರಕಲ್ಲು ಅಧ್ಯಕ್ಷರಾದ ಸಾದಿಕ್, ಜುಮ್ಮಾ ಮಸೀದಿ ಆಡಳಿತ ಕಾರ್ಯದರ್ಶಿಗಳಾದ ಕೆ.ಪಿ ಉಮರ್ ಮುಸ್ಲಿಯಾರ್ ಹಾಗೂ ಹನೀಫ್, ಪಿ ಎಫ್ ಐ ಕಮ್ಯುನಿಟಿ ಡೆವಲಪ್ಮೆಂಟ್ ಪಾಂಡವರಕಲ್ಲು ಅಧ್ಯಕ್ಷರಾದ ಹಂಝ ಪಾಂಡವರಕಲ್ಲು, ಜಮಾಅತ್ ಉಪಾಧ್ಯಕ್ಷರಾದ ಹಕೀಮ್ ಕುದುರು, ಸದಸ್ಯರಾದ ರಝ್ಝಾಕ್ ಬರ್ಕಟ, ನುಸ್ರತುಲ್ ಇಸ್ಲಾಂ ಯಂಗ್ಮೆನ್ಸ್ ಪಾಂಡವರಕಲ್ಲು ಅಧ್ಯಕ್ಷರಾದ ಶಂಶುದ್ದೀನ್ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.