ಸೌದಿ ಅರೇಬಿಯ (www.vknews.in) : 1995 ರಲ್ಲಿ ಸೌದಿ ಅರೇಬಿಯಾದ ಅಲ್ ಕೋಬಾರ್ ನಲ್ಲಿ ಜನ್ಮತಾಳಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ 2024 ರ ಸದಸ್ಯತ್ವ ಅಭಿಯಾನಕ್ಕೆ ಮಂಗಳೂರು ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷರಾದ ಬಹುಮಾನ್ಯ ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೊಳ್ ರವರು ದಿನಾಂಕ 30/08/2024 ಶುಕ್ರವಾರ ಸಾಯಂಕಾಲ ಭಾರತೀಯ ಕಾಲಮಾನ 4:30 ಕ್ಕೆ ಝೂಮ್ ಅಪ್ಲಿಕೇಶನ್ ನಲ್ಲಿ ಬಿತ್ತಿಪತ್ರ ಅನಾವರಣ ಮಾಡುವುದರ ಮೂಲಕ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸಂಘಟನೆಯ ಅಧೀನದಲ್ಲಿ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮೂಳೂರು ಇಹ್ಸಾನ್ ನಗರದಲ್ಲಿ 2500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆಯುತ್ತಿದ್ದು ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಸದಸ್ಯತ್ವ ಅಭಿಯಾನ ಕ್ಕೆ ಪಾಲ್ಗೊಳ್ಳಲು ಕರೆ ನೀಡಿದರು ಮತ್ತು ಯಶಸ್ವಿಯಾಗಲು ಹಾರೈಸಿದರು.
ಸದಸ್ಯತ್ವ ಅಭಿಯಾನವು ಇದೇ ಬರುವ *SEP 04 ರಿಂದ OCT 14 ರ ವರೆಗೆ* ನಡೆಯಲಿದ್ದು ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯ,ಬಹರೈನ್,ಕತಾರ್,ಒಮಾನ್,ಕುವೈಟ್,ಯುಎಇ ಯಲ್ಲಿರುವ ಅನಿವಾಸಿ ಭಾರತೀಯರು ಹಾಗೂ ಭಾರತದಲ್ಲಿರುವ ಸಹೃದಯಿ ಬಾಂಧವರು ಸದಸ್ಯತ್ವ ಅಭಿಯಾನದಲ್ಲಿ ಕೈ ಜೋಡಿಸಿ ಯಶಸ್ವಿಗೊಳಿಸಲು ಸಂಘಟನಾ ವಕ್ತಾರರು ಸದಸ್ಯರಲ್ಲಿ ವಿನಂತಿಸಿದರು.
ಆರಂಭದಲ್ಲಿ,ಕೇಂದ್ರ ಸಮಿತಿ ಮೀಡಿಯಾ ವಿಭಾಗದ ಇಸ್ಮಾಯಿಲ್ ಕಾಟಿಪಳ್ಳ ಖಿರಾಅತ್ ಪಠಿಸಿದರು,ಮಕ್ಕಾ ವಲಯ ಫ್ಯಾಮಿಲಿ ಮುಲಾಖಾತ್ 2024 ರ ಸ್ವಾಗತ ಸಮಿತಿ ಚೆಯರ್ಮಾನ್ ಬಹುಮಾನ್ಯ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ ದುಆ ನೆರವೇರಿಸಿದರು. ಡಿಕೆಯಸ್ಸಿ ಕೇಂದ್ರ ಸಮಿತಿ ನೂತನ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್ ಅಭಿಯಾನದ ಬಗ್ಗೆ ವಿವರ ನೀಡಿದರು. ಕೇಂದ್ರ ಸಮಿತಿ ಸದಸ್ಯ ಜಮಾಲ್ ಸ್ವಾಲಿಹ್ ಕಣ್ಣಂಗಾರ್ ಸ್ವಾಗತಗೈದರು,ಯೂತ್ ವಿಂಗ್ ಜುಬೈಲ್ ಘಟಕದ ಪ್ರಧಾನ ಕಾರ್ಯದರ್ಶಿ ಶಫೀರ್ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು. ಕೇಂದ್ರ ,ವಲಯ,ರಾಷ್ಟೀಯ,ಜಿಲ್ಲಾ ಮತ್ತು ಅದರ ಘಟಕ ಸಮಿತಿಗಳ ನಾಯಕರು ಹಾಗು ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.